⚡ಟ್ರೆಂಡಿಂಗ್

ಸಚಿವ ಶಿವರಾಜ್ ತಂಗಡಗಿ ಆರೋಗ್ಯದ ಬಗ್ಗೆ ವದಂತಿ ಬೇಡ: ಸ್ವತಃ ಸಚಿವರಿಂದಲೇ ಸ್ಪಷ್ಟನೆ

ಬೆಂಗಳೂರು: "ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯವಿಲ್ಲ" ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಚಿವರ ಆರೋಗ್ಯದ ಬಗ್ಗೆ ಹರಡಿದ್ದ ವದಂತಿಗಳಿಗೆ ತೆರೆ ಎಳೆದಿರುವ ಅವರು, ಭಾನುವಾರ ರಾತ್ರಿ ತಮಗಾದ ಆರೋಗ್ಯ ಏರುಪೇರಿನ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದ್ದಾರೆ.

ನಡೆದದ್ದೇನು?
ನಾಲ್ಕು ದಿನಗಳ ಹಿಂದೆ ತಮ್ಮ ಕನಕಗಿರಿ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮುಗಿಸಿ, ಕೊಪ್ಪಳದಿಂದ ಬೆಂಗಳೂರಿಗೆ ಮರಳುವಾಗ ಭಾನುವಾರ ರಾತ್ರಿ ಮಾರ್ಗಮಧ್ಯೆ ಸಚಿವರಿಗೆ ಎದೆಯಲ್ಲಿ ಲಘು ನೋವು (ಎದೆ ಚುಚ್ಚಿದ ಅನುಭವ) ಕಾಣಿಸಿಕೊಂಡಿತ್ತು.

ವೈದ್ಯರ ಸಲಹೆ ಮತ್ತು ತಪಾಸಣೆ:
ತಕ್ಷಣವೇ ತಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿದ ಸಚಿವರಿಗೆ, ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಇಸಿಜಿ (ECG) ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಗಾಗಿದ್ದರು.

ಗ್ಯಾಸ್ಟ್ರಿಕ್ ಸಮಸ್ಯೆ, ಆತಂಕ ಬೇಡ:
ಪರೀಕ್ಷೆಯ ನಂತರ ವೈದ್ಯರು ಯಾವುದೇ ಗಂಭೀರ ತೊಂದರೆ ಇಲ್ಲ ಎಂದು ದೃಢಪಡಿಸಿದ್ದಾರೆ. ಕೇವಲ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿರುವುದಾಗಿ ಸಚಿವರು ಹೇಳಿದ್ದಾರೆ.

"ನಾನು ಆರೋಗ್ಯವಾಗಿದ್ದೇನೆ. ಆಸ್ಪತ್ರೆಗೆ ಭೇಟಿ ನೀಡಿದ್ದು ಕೇವಲ ಮುನ್ನೆಚ್ಚರಿಕೆ ತಪಾಸಣೆಗಾಗಿ ಮಾತ್ರ. ಯಾರೂ ವದಂತಿಗಳನ್ನು ಹಬ್ಬಿಸಬಾರದು. ಸೋಮವಾರ ಬೆಳಿಗ್ಗೆ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ನಾನು ಎಂದಿನಂತೆ ಭಾಗವಹಿಸಲಿದ್ದೇನೆ," ಎಂದು ಸಚಿವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ.

ಸುದ್ದಿಗಾಗಿ. 9380127872/9916746881

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...