ಬಡವರ ವಲಸೆ ತಡೆಯಿರಿ: ಉದ್ಯೋಗ ಖಾತ್ರಿ ಕೆಲಸಕ್ಕೆ ಖಾಜಾವಲಿ ಸಿದ್ದಾಪುರ ಆಗ್ರಹ

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಸಮಸ್ಯೆಯಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಜಿಲ್ಲೆಯ ಬಡ ಕಾರ್ಮಿಕರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ತಕ್ಷಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಖಾಜಾವಲಿ ಎಚ್. ಸಿದ್ದಾಪುರ ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿದ ಅವರು, "ಜಿಲ್ಲೆಯ ಜನ ಜೀವನೋಪಾಯಕ್ಕಾಗಿ ಊರು ಬಿಡುವುದು ನೋವಿನ ಸಂಗತಿ. ಜಿಲ್ಲಾಧಿಕಾರಿಗಳು ಮತ್ತು ಸಿಇಓ ಅವರು ತಕ್ಷಣ ಗಮನಹರಿಸಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಲಸ ಆರಂಭಿಸಬೇಕು. ಕಾರ್ಮಿಕರು ಮಾಡಿದ ಕೆಲಸದ ಕೂಲಿಯನ್ನು ತಕ್ಷಣ ಅವರ ಖಾತೆಗೆ ಜಮೆ ಮಾಡಿ, ಬಡವರ ಜೀವನಕ್ಕೆ ಆಸರೆಯಾಗಬೇಕು" ಎಂದು ಆಗ್ರಹಿಸಿದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...